ವಚನ - 1231     
 
ಭಕ್ತ ಭಕ್ತನ ಕಂಡಲ್ಲಿ ಕೈಮುಗಿವುದೆ ಭಕ್ತಸ್ಥಲ. ಜಂಗಮ ಜಂಗಮವ ಕಂಡಲ್ಲಿ ಶರಣೆಂಬುದೆ ಜಂಗಮಸ್ಥಲ. ಭಕ್ತ ಜಂಗಮ ಎಂದು ಬೇರುಂಟೆ ? ರಸದಂತೆ ಭಕ್ತ, ರುಚಿಯಂತೆ ಜಂಗಮ ಕಾಣಾ, ಕಪಿಲಸಿದ್ಧಮಲ್ಲಿಕಾರ್ಜುನಾ.