ಭಕ್ತನು ಭಕ್ತಿಯಿಂದರ್ಪಣ ಮಾಡಿಸುವಡೆ,
ಭಕ್ತಂಗೆ ಭಕ್ತಸ್ಥಲ.
ಜಂಗಮನು ಆ ಭಕ್ತನ ಭಕ್ತಿಯ
ವಹಿಸಿ ಪಾದೋದಕ ಕೊಡುವುದೆ
ಆ ಜಂಗಮಕ್ಕೆ ಭಕ್ತಸ್ಥಲ.
ಭಕ್ತಂಗಾಗಲಿ, ಜಂಗಮಕ್ಕಾಗಲಿ ಭಕ್ತಿಯೆ ಬೇಕು.
ಭಕ್ತಿಯಿಲ್ಲದೆ ಮೆರೆವವರು
ಭಕ್ತರಲ್ಲಾ ಜಂಗಮರಲ್ಲಾ ನೋಡಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Bhaktanu bhaktiyindarpaṇa māḍisuvaḍe,
bhaktaṅge bhaktasthala.
Jaṅgamanu ā bhaktana bhaktiya
vahisi pādōdaka koḍuvudu
ā jaṅgamakke bhaktasthala.
Bhaktanāgali, jaṅgamakkāgali bhaktiyē bēku.
Bhaktiyillade merevavaru
bhaktarallā jaṅgamarallā nōḍayya,
kapilasid'dhamallikārjunā.