ಎಲೆ ಅಯ್ಯಾ,
ಅವರ ಗುಣಕ್ಕೆ ಮುನಿವೆನಲ್ಲದೆ
ಅವರ ರೂಪಿಂಗೆ ಮುನಿವೆನೆ? ಇಲ್ಲಿಲ್ಲ.
ಅವನು ಅನಾಚಾರದಲ್ಲಿ ಆಚರಿಸಿದಡೆ,
ತಂದೆ ಸದಾಚಾರಕ್ಕೆ ತರಬೇಕೆಂದು [ಮುನಿವನಲ್ಲದೆ]
ಆತನ ಮೇಲೆ ಮುನಿವನೆ ? ಇಲ್ಲಿಲ್ಲ.
ನಾನು ಅಂತಾಗಬೇಕೆಂದು
ಮುನಿವೆನಲ್ಲದೆ ಜಂಗಮಕ್ಕೆ ಮುನಿವೆನೆ?
ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Ele ayya,
avara guṇakke munivenallade
avara rūpiṅge munivene? Illilla.
Avanu anācāradalli ācarisidaḍe,
tande sadācārakke tarabēkendu [munivanallade]
ātana mēle munivane? Illilla.
Nānu antāgabēku
munivenallade jaṅgamakke munivene?
Kapilasid'dhamallikārjunā.