ಎಲೆ ಅಯ್ಯಾ ಅಯ್ಯಾ,
ಎನ್ನ ಶಿರ ನಿಮ್ಮ ಚರಣವ ಮುಟ್ಟಿದ ಬಳಿಕ
ಎನ್ನಲ್ಲಿ ಗುಣದೋಷವನರಸುವರೆ ?
`ಭೃತ್ಯಾಪರಾಧಃ ಸ್ವಾಮಿನೋ ದಂಡಃ' !
ಕಪಿಲಸಿದ್ಧಮಲ್ಲಿಕಾರ್ಜುನದೇವಾ,
ತ್ರಾಹಿ ತ್ರಾಹಿ, ಕಾಯಯ್ಯಾ.
Transliteration Ele ayya ayya,
enna śira nim'ma caraṇava muṭṭida baḷika
ennalli guṇadōṣavanarasuvare?
`Bhr̥tyāparādhaḥ svāminō daṇḍaḥ' !
Kapilasid'dhamallikārjunadēva,
trāhi trāhi, kāyayya.