ವಚನ - 1237     
 
ಹರಿಯೆಂಬಾತ ನಿಮ್ಮ ಚರಣವನರಿಯ; ಬ್ರಹ್ಮನೆಂಬಾತ ನಿಮ್ಮ ಮುಕುಟವನರಿಯ; ಯತಿ ವ್ರತಿ ಋಷಿಗಳೆಂಬವರು ನಿಮ್ಮ ಒಳಗನರಿಯರು; ಸಮಸ್ತ ದೇವರ್ಕಳು ನಿಮ್ಮ ರೋಮದ ಪ್ರಮಾಣವನರಿಯರು; ಶತಕೋಟಿ ಸೂರ್ಯರು ನಿಮ್ಮ ಬೆಳಗ ಕಾಣಲರಿಯರು. ಕಪಿಲಸಿದ್ಧಮಲ್ಲಿಕಾರ್ಜುನಾ, ನಾ ನಿಮ್ಮನರಿಯಬಲ್ಲವನೇ ಅಯ್ಯಾ?