ವಚನ - 1236     
 
ಅನಂತಕೋಟಿ ದೇವರೆಲ್ಲರೂ ತಂಡತಂಡದಲ್ಲಿ ದಂಡ ಪ್ರಣಾಮಂಗೈಯಲು ಅವರ ಮುಕುಟ ಸಂಘಟ್ಟ ರಜ ಉದುರಲಿಕ್ಕೆ ಅಲ್ಲಿ ರಜತಗಿರಿಗಳಾದವು, ಕಪಿಲಸಿದ್ಧಮಲ್ಲಿಕಾರ್ಜುನ ದೇವರದೇವಾ, ನಿಮ್ಮ ಮುಂದೆ.