ವಚನ - 1239     
 
ಕೈಗಳ ಬಿಚ್ಚಿ ಬಿಸಾಟಡೆ ಬಿಡೆನು ! ಮೈಗಳ ಕಡಿದು ಹರಹಿದಡೆ ಬಿಡೆನು, ಬಿಡೆ ನಿಮ್ಮ ಚರಣವ. ತನುವಳಿದಡೆ ಜ್ಞಾನತನುವಿಂದ ಕೂಡುವೆ ಕಪಿಲಸಿದ್ಧಮಲ್ಲಿಕಾರ್ಜುನಾ ನಿಮ್ಮ.