ತನುವಿದ್ದು ತನುವಿಲ್ಲ, ಮನವಿದ್ದು ಮನವಿಲ್ಲ,
ಭಾವವಿದ್ದು ಭಾವವೆಂಬ ಬುದ್ಧಿಯಿಲ್ಲ.
ನೀನೆಂಬುದುಂಟಾಗಿ ಭೃತ್ಯಾಚಾರವಿಲ್ಲ,
ನಾನೆಂಬುದುಂಟಾಗಿ ಅಹಂಕಾರವಿಲ್ಲ.
ಕಪಿಲಸಿದ್ಧಮಲ್ಲಿನಾಥಯ್ಯನಲ್ಲಿ
ಲಿಂಗಸಂಗ ನಿರ್ಲೇಪವೆಂಬುದ
ಇದಿರಿಂಗೆ ನುಡಿದು ಹೇಳಬಾರದು ಕಾಣಾ,
ಚೆನ್ನಬಸವಣ್ಣಾ.
Transliteration Tanuviddu tanuvilla, manaviddu manavilla,
bhāvaviddu bhāvavemba bud'dhiyilla.
Nīnembuduṇṭāgi bhr̥tyācāravilla,
nānembuduṇṭāgi ahaṅkāravilla.
Kapilasid'dhamallināthayyanalli
liṅgasaṅga nirlēpavembuda
idiriṅge nuḍidu hēḷabāradu kāṇā,
cennabasavaṇṇā.