ಒಡೆಯರುಳ್ಳ ತೊತ್ತಾನು;
ತಾಯುಳ್ಳ ಶಿಶುವಾನು;
ಸ್ವತಂತ್ರವೇಕಯ್ಯಾ,
ನಿಮ್ಮವರ ನಡುವೆ ಎನಗೆ?
ನಿಮ್ಮವರು ಎನ್ನನೊಲ್ಲದಿದ್ದ
ದುಃಖವನು ಮರೆವೆ ನಾನು;
ನಿಮ್ಮವರಾಜ್ಞೆಯ ಮೀರಿದೆನಾಯಿತ್ತಾದಡೆ
ನಿಮ್ಮಾಣೆಯಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Oḍeyaruḷḷa tottānu;
tāyuḷḷa śiśuvanu;
svatantravēkayyā,
nim'mavara naḍuve enage?
Nim'mavaru ennanolladidda
pātravanu mareve nānu;
nim'mavarājñeya mīridenāyittādaḍe
nim'māṇeyayya,
kapilasid'dhamallikārjunā.