•  
  •  
  •  
  •  
Index   ವಚನ - 1251    Search  
 
ಎಂದಿಪ್ಪೆನಯ್ಯಾ, ಶುದ್ಧ ಸಿದ್ದ ಪ್ರಸಿದ್ಧ ಪ್ರವೇಶಿಯಾಗಿ! ಎಂದಿಪ್ಪೆನಯ್ಯಾ, ಭಕ್ತಿ ಜ್ಞಾನ ವೈರಾಗ್ಯ ಸಂಪನ್ನನಾಗಿ; ಎಂದಿಪ್ಪೆನಯ್ಯಾ, ತತ್ತ್ವಾತತ್ತ್ವ ತೂರ್ಯಾತೂರ್ಯ ನೀನೆಯಾಗಿ; ಎಂದಿಪ್ಪೆನಯ್ಯಾ, ದೀಕ್ಷಾತ್ರಯದಲ್ಲಿ ಸಂಪನ್ನನಾಗಿ; ಎಂದಿಪ್ಪೆನಯ್ಯಾ, ಲಿಂಗತ್ರಯದಲ್ಲಿ ಪ್ರಸಾದಿಸಂಪನ್ನನಾಗಿ; ಎಂದಿಪ್ಪೆನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ನಿಮ್ಮವರ ನಡುವೆ ಓರಂತೆ.
Transliteration Endippenayyā, śud'dha sidda prasid'dha pravēśiyāgi! Endippenayyā, bhakti jñāna vairāgya sampannanāgi; endippenayyā, tattvatattva tūryatūrya nīneyāgi; endippenayyā, dīkṣātrayadalli sampannanāgi; endippenayyā, liṅgatrayadalli prasādasampannanāgi; endippenayya, kapilasid'dhamallikārjunayya, nim'mavara naḍuve ōrante.