ಹಿಂದೆ ಬಯಸಿದೆ ಕಾಳುತನದಲ್ಲಿ,
ಎನ್ನ ಮಂದಮತಿಯ ನೋಡದಿರಯ್ಯಾ!
ಕೆರೆ ಬಾವಿ ಹೂದೋಟ ಚೌಕ ಛತ್ರಂಗಳ ಮಾಡಿ,
ಜೀವಂಗಳ ಮೇಲೆ ಕೃಪೆಯುಂಟೆಂದು ಎನ್ನ ದಾನಿಯೆಂಬರು.
ಆನು ದಾನಿಯಲ್ಲವಯ್ಯಾ, ನೀ ಹೇಳಿದಂತೆ ನಾ ಮಾಡಿದೆನು.
ನೀ ಬರಹೇಳಿದಲ್ಲಿ ಬಂದೆನು; ನೀ ಇರಿಸಿದಂತೆ ಇದ್ದೆನು.
ನಿನ್ನ ಇಚ್ಛಾಮಾತ್ರವ ಮೀರಿದೆನಾಯಿತ್ತಾದಡೆ
ಫಲ ಪದ ಜನನವ ಬಯಸಿದೆನಾದಡೆ ನಿಮ್ಮಾಣೆ!
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ,
ಭವಕ್ಕೆ ಬರಿಸದಿರಯ್ಯಾ ನಿಮ್ಮ ಧರ್ಮ!
Transliteration Hinde bayaside kāḷutanadalli,
enna mandamatiya nōḍadirayyā!
Kere bāvi hūdōṭa cauka chatragaḷannu māḍi,
jīvaṅgaḷa mēle kr̥peyuṇṭendu enna dāniyembaru.
Ānu dāniyallavayyā, nī hēḷidante nā māḍidenu.
Nī barahēḷidalli bandenu; nī irisidante iddenu.
Ninna icchāmātrava mīridenāyittādaḍe
phala pada jananava bayasidenādaḍe nim'māṇe!
Kapilasid'dhamallikārjunayya,
bhavakke barisadirayyā nim'ma dharma!