ಮಾಡಿಸಯ್ಯಾ, ಎನಗೆ ನಿಮ್ಮವರ ಸಂಗವ.
ಮಾಡಿಸಯ್ಯಾ, ಎನಗೆ ನಿಮ್ಮವರಾನಂದವ.
ಆಗಿಸಯ್ಯಾ, ನಿಮ್ಮವರಂತೆ.
ನೋಡಿಸಯ್ಯಾ, ನಿಮ್ಮವರ ಕೂಡೆ ಸಂಗವ ಮಾಡಿಸಯ್ಯಾ
ಎನಗೆ ಬಚ್ಚಬರಿಯ ಭಕ್ತಿಯ ಕೊಡಿಸಯ್ಯಾ.
ಎನಗೆ ಪಾದೋದಕ ಪ್ರಸಾದವನೊಚ್ಚತವ ಸಲಿಸಯ್ಯಾ.
ನಿಮ್ಮವರ ಕೂಡೆ ಸಿಕ್ಕಿ ಇರಿಸಯ್ಯಾ.
ನಿಮ್ಮವರ ಪಾದದ ಕೆಳಗೆ ನಿತ್ಯವಾಗಿ ಬರಿಸಯ್ಯಾ,
ಎನ್ನ ಭವಭವದಲ್ಲಿ.
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ,
ನೀನಿಂತು ಕೆಡಿಸಯ್ಯಾ ಎನ್ನ ಭವಭವದ ಹುಟ್ಟ.
Art
Manuscript
Music
Courtesy:
Transliteration
Māḍisayyā, enage nim'mavara saṅgava.
Māḍisayyā, enage nim'mavarānandava.
Āgisayya, nim'mavarante.
Nōḍisayyā, nim'mavara kūḍe saṅgava māḍisayyā
enage baccabariya bhaktiya koḍisayyā.
Enage pādōdaka prasādavanoccatava salisayyā.
Nim'mavara kūḍe sikki irisayya.
Nim'mavara pādada keḷage nityavāgi barisayya,
enna bhavabhavadalli.
Kapilasid'dhamallikārjunayya,
nīnintu keḍisayyā enna bhavabhavada huṭṭa.