•  
  •  
  •  
  •  
Index   ವಚನ - 1256    Search  
 
ನುಡಿಯಬಹುದು ಅದ್ವೈತವನೊಂದುಕೋಟಿ ವೇಳೆ? ಒಮ್ಮೆ ನಡೆಯಬಹುದೆ ನಿರ್ಧರವಾಗಿ ಸದ್ಭಕ್ತಿ ಸದಾಚಾರವ? ನುಡಿದಂತೆ ನಡೆವ, ನಡೆದಂತೆ ನುಡಿವ ಸದ್ಭಕ್ತಿ ಸದಾಚಾರಯುಕ್ತ ಮಹಾತ್ಮರ ಪಾದವ ಹಿಡಿದು ಬದುಕಿಸಯ್ಯಾ, ಪ್ರಭುವೆ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Nuḍiyabahudu advaitavanondukōṭi vēḷe? Om'me naḍeyabahude nirdharavāgi sadbhakti sadācārava? Nuḍidante naḍeva, naḍedante nuḍiva sadbhakti sadācārayukta mahātmara pādava hiḍidu badukisayyā, prabhuve, kapilasid'dhamallikārjunā.