ವಚನ - 1262     
 
ಹಾರುವೆ ಹಾರುವೆನಯ್ಯಾ ಮೂರರ ಮನೆಯ. ನೋಡುವೆ ನೋಡುವೆನಯ್ಯಾ ಆರರ ಮನೆಯ. ಕೂಡುವೆ ಕೂಡುವೆನಯ್ಯಾ ಈರಾರರ ಮನೆಯ. ಆಡುವೆ ಆಡುವೆನಯ್ಯಾ, ಕಪಿಲಸಿದ್ಧಮಲ್ಲಯ್ಯಾ, ಮತ್ತೂ ಮೂರರಲ್ಲೆ.