•  
  •  
  •  
  •  
Index   ವಚನ - 1263    Search  
 
ನದಿಯ ನೀರು ಹೋದುವಯ್ಯಾ ಸಮುದ್ರಕ್ಕೆ ; ಸಮುದ್ರದ ನೀರು ಬಾರವಯ್ಯಾ ನದಿಗೆ. ನಾನು ಹೋದೆನಯ್ಯಾ ಲಿಂಗದ ಕಡೆಗೆ; ಲಿಂಗ ಬಾರದು ನೋಡಯ್ಯಾ ನನ್ನ ಕಡೆಗೆ. ಮಗ ಮುನಿದಡೆ ತಂದೆ ಮುನಿಯನು; ನಾ ಮುನಿದಡೆ ನೀ ಮುನಿಯೆ ನೋಡಯ್ಯಾ, ಕಪಿಲಸಿದ್ಧಮಲ್ಲಿನಾಥಾ.
Transliteration Nadiya nīru hōdavayya samudrakke; samudrada nīru bāravayya nadige. Nānu hōdenayyā liṅgada kaḍege; liṅga bāradu nōḍayyā nanna kaḍege. Maga munidaḍe tande muniyanu; nā munidaḍe nī muniye nōḍayya, kapilasid'dhamallinātha.