ವಚನ - 1267     
 
ಎರಡಳಿದು ಒಂದಳವಟ್ಟುದೆ ಭಕ್ತಿಸ್ಥಲ; ಮೂರಳಿದು ಎರಡಳವಟ್ಟುದೆ ಜಂಗಮಸ್ಥಲ; ಈ ಎರಡಳಿದು ನಿಂದುದೆ ಪ್ರಾಣಲಿಂಗಿಸ್ಥಲ ನೋಡಯ್ಯಾ. ಗುರುವೆ, ಸುರತರುವೆ, ಎನ್ನ ಕಾಮಧೇನುವೆ, ಕೈಲಾಸದ ಮಹಾಲಿಂಗಮೂರ್ತಿಯೆ, ಈ ಲೋಕದ ಜ್ಞಾನಮೂರ್ತಿಯೆ, ಕಪಿಲಸಿದ್ಧಮಲ್ಲೇಶನೆ, ಚೆನ್ನಬಸವಣ್ಣನೆ.