•  
  •  
  •  
  •  
Index   ವಚನ - 1284    Search  
 
ಮುನ್ನ ಮುನ್ನ-ಶಶಿ ರವಿಗಳಿಲ್ಲದ ಮುನ್ನ, ಬ್ರಹ್ಮ-ವಿಷ್ಣ್ವಾದಿಗಳುದ್ಭವಿಸದ ಮುನ್ನ ಮುನ್ನ, ಮೂರ್ತಿಗಳೆಂಟು ಒಂದಾಗದ ಮುನ್ನ, ತನುಮಧ್ಯವಳಯದಲ್ಲಿ ಸಕಲ ಬ್ರಹ್ಮಾಂಡ ಜಲಮಯವಾಗಿಪ್ಪಲ್ಲಿ, ಭಕ್ತಿಕಾರಣ ಬಸವನವಗ್ರಹಿಸಿಪ್ಪಲ್ಲಿ ಅದೆತ್ತಲಿದ್ದೆ? ಅದ ನೀನೆ ಬಲ್ಲೆಯಯ್ಯಾ! ಕಪಿಲಸಿದ್ಧಮಲ್ಲಿಕಾರ್ಜುನಯ್ಯ ಕುರುಹುಗೆಟ್ಟ ನಿಶ್ಚಿಂತನು.
Transliteration Munna munna-śaśi ravigaḷillada munna, brahma-viṣṇvādigaḷudbhavisada munna munna, mūrtigaḷeṇṭu ondāgada munna, tanumadhyavaḷayadalli sakala brahmāṇḍa jalamayavāgippalli, bhaktikāraṇa basavanavagrahisippalli adettalidde? Ada nīne balleyayyā! Kapilasid'dhamallikārjunayya kuruhugeṭṭa niścintanu.