ಅರ್ಪಿತ ಅವಧಾನ ಮುಖಂಗಳು ಎಲ್ಲರಿಗೆ ಸುಲಭವೆ,
ಅನಾದಿ ಸಂಸಿದ್ಧವಾಗಿ ಬಂದ ಬಸವಣ್ಣಂಗಲ್ಲದೆ?
ತ್ರೈಲಿಂಗಮೂಲಕ್ಕೆ ಮಂತ್ರಾದಿರೂಪ ಬಸವಣ್ಣ.
ತ್ರೈಲಿಂಗಪ್ರಸಾದಕ್ಕೆ ಅರ್ಹ ಬಸವಣ್ಣ.
ಮೂರುಲಿಂಗ ಒಂದಾದ ಮೂರ್ತಿ ಬಸವಣ್ಣ.
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ,
ನೀ ಸಾಕ್ಷಿಯಾಗಿ ಬಸವಣ್ಣನ ನೆನೆವವರು ನೀನಹರು.
Transliteration Arpita avadhāna mukhagaḷu ellarigū sulabhave,
anādi sansid'dhavāgi banda basavaṇṇaṅgallade?
Trailiṅgamūlakke mantrādirūpa basavaṇṇa.
Trailiṅgaprasādakke ar'ha basavaṇṇa.
Mūruliṅga ondāda mūrti basavaṇṇa.
Kapilasid'dhamallikārjunayya,
nī sākṣiyāgi basavaṇṇana nenevavaru nīnaharu.