ನೀವು ಮಹಿಮರು;
ನಿಮ್ಮ ಮಹಿಮೆ ತಿಳಿಯದು ನೋಡಯ್ಯಾ.
ನಿಮ್ಮ ಸತ್ವವೆ ಬಸವಣ್ಣನು,
ನಿಮ್ಮ ಜ್ಞಾನವೆ ಚೆನ್ನಬಸವಣ್ಣನು,
ನಿಮ್ಮ ರಾಣಿಯರೆ ಅಕ್ಕನಾಗಮ್ಮನು,
ನಿಮ್ಮ ಮಹತ್ವವೆ ಪ್ರಭುದೇವರು
ನೋಡಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Nīvu mahimaru;
nim'ma mahime tiḷiyadu nōḍayya.
Nim'ma satvave basavaṇṇanu,
nim'ma jñānave cennabasavaṇṇanu,
nim'ma rāṇiyare akkanāgam'manu,
nim'ma mahatvave prabhudēvaru
nōḍayya, kapilasid'dhamallikārjunā.