ನೀರಿಲ್ಲದಲ್ಲಿ ಜಳಕವ ಮಾಡಿ,
ತರುವಿಲ್ಲದಲ್ಲಿ ಪುಷ್ಪವನೆತ್ತಿ
ಕರವಿಲ್ಲದೆ ಪೂಜಿಸಬಲ್ಲಡೆ ಜಂಗಮವೆಂಬೆ ಕಾಣಾ,
ಕಪಿಲಸಿದ್ಧಮಲ್ಲಿಕಾರ್ಜುನದೇವಾ,
ಆನು ತ್ರಿಕರಣಶುದ್ಧನಾಗಿ.
Transliteration Nīrilladalli jaḷakava māḍi,
taruvilladalli puṣpavanetti
karavillade pūjisaballaḍe jaṅgamavembe kāṇā,
kapilasid'dhamallikārjunadēva,
ānu trikaraṇaśud'dhanāgi.