ವಚನ - 1321     
 
ನೀರ ಕುಡಿದು ಅಗ್ನಿಯ ನುಂಗಿದವರ ಜಂಗಮವೆಂಬೆ. ಊರ ನೋಡಿ ಸೇರದವರ ಜಂಗಮವೆಂದೆಂಬೆ. ಹೆಣ್ಣ ಭೋಗಿಸಿ ಮುಕ್ಕಣ್ಣನ ಪಡೆದಾತನ ಜಂಗಮವೆಂಬೆನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.