ವಚನ - 1322     
 
ಜಂಗಮವಾದುದಕ್ಕೆ ಇದೆ ಚಿಹ್ನೆ ನೋಡಾ: ಅಂಗವಿಡಿದು ಲಿಂಗವ ಪೂಜಿಸುವ; ಲಿಂಗವಿಡಿದು ಅಂಗವ ಪೂಜಿಸ ನೋಡಾ. ಶತದಳ ಸಹಸ್ರಸೂರ್ಯವರ್ಣದ ಪದ್ಮದೊಳಿಪ್ಪ ಮಹಾಲಿಂಗವನುರುಹಿ, ಪ್ರಾಣಲಿಂಗಿಯ ಕೂಟವನರಿಪಾತನೆ ಜಂಗಮ ಕಾಣಾ, ಕಪಿಲಸಿದ್ಧಮಲ್ಲಿಕಾರ್ಜುನಾ.