•  
  •  
  •  
  •  
Index   ವಚನ - 1338    Search  
 
ಮಾತುಳ್ಳನ್ನಕ್ಕ ದೇಹ ಹಿಂಗದು; ನೆನಹುಳ್ಳನ್ನಕ್ಕ ಪ್ರಾಣ ಸೂತಕ ಬಿಡದು; ಕಾಯದ ಜೀವದ ಹೊಲಿಗೆಯ ಸಂದ ಬಿಚ್ಚಲರಿಯದು; ಆನು ನಿರ್ದೇಹಿ ಎಂದಡೆ ನಗರೆ ನಿಮ್ಮ ಪ್ರಮಥರು? ಎನ್ನ ಅಂತರಂಗದಲುಳ್ಳ ಅವಗುಣವ ಹಿಂಗಿಸಿ, ನಿಮ್ಮಂತೆ ಮಾಡಿದಡಾನುಳಿವೆನಲ್ಲದೆ ಬೇರೆ ಗತಿಯ ಕಾಣೆ ನೋಡಾ, ಅಯ್ಯಾ, ಕಪಿಲಸಿದ್ಧಮಲ್ಲಿನಾಥಾ.
Transliteration Mātuḷḷannakka dēha hiṅgadu; nenahuḷḷannakka prāṇa sūtaka biḍadu; kāyada jīvada holigeya sanda biccalariyadu; ānu nirdēhi endaḍe nagare nim'ma pramatharu? Enna antaraṅgadaluḷḷa avaguṇava hiṅgisi, nim'manteḍānuḷivenallade bēre gatiya kāṇe nōḍā, ayyā, kapilasid'dhamallināthā.