ವಚನ - 1343     
 
ಕಂಡ ಕನಸು ದಿಟವಾಗಿ ಕಂಡೆನೆಂಬೆ ಕಂಡೆನೆಂಬುದು ಬೆನ್ನ ಬಿಡದು ನೋಡಾ. ಕಂಡುದ ಕಾಣೆನೆಂಬುದ ಎರಡನೂ ಅರಿಯದೆ ತವಕ ತಲ್ಲಣಕ್ಕೆ ಎಡೆಯಾದೆನು. ತವಕದ ಕೂಟ ನಿಮ್ಮಲ್ಲಿ ತದುಗತವಾದೆನು ಕಪಿಲಸಿದ್ಧಮಲ್ಲಿನಾಥಯ್ಯಾ, ನಿಮ್ಮ ಕರುಣವೆನಗೆ ಸಾಧ್ಯವಾಯಿತ್ತು.