Index   ವಚನ - 1344    Search  
 
ಕೂಡುವ ತವಕವೆ ನಿಮ್ಮಲ್ಲಿ ನೀ ಕೂಪನಾಗಿದ್ದಲ್ಲಿ ಕೂಪೆ ನೋಡಯ್ಯಾ. ನೀನೊಲ್ಲದಿದ್ದರೆ ಒಲ್ಲೆನಯ್ಯಾ. ಎನ್ನರಿವು ಮರವೆ ಇಬ್ಬರಿಗೂ ಸಮ ನೋಡಯ್ಯಾ. ಎನ್ನ ಬಯಕೆಯೊಳಗಣ ಬಯಕೆಯ ನಿಧಾನವು ನೀನೆಂದು ಕಂಡ ಬಳಿಕ ಬಯಸುವಾತ ನೀನೆ ಕಾಣಾ, ಕಪಿಲಸಿದ್ಧಮಲ್ಲಿನಾಥಯ್ಯಾ.