•  
  •  
  •  
  •  
Index   ವಚನ - 1360    Search  
 
ನಾ ನಿಮ್ಮ ರೂಪ ವಿಚಾರಿಸುವನಲ್ಲ ಕೇಳಾ; ನಮ್ಮ ಧ್ಯಾನದಲ್ಲಿ ಇಪ್ಪಾತನಲ್ಲ ಕೇಳಾ. ಅತ್ಯತಿಷ್ಠದ್ದಶಾಂಗುಲದಲ್ಲಿ ನಿಮ್ಮನಿಲಿಸಿ, ನಾನೊಂದೆಡೆಯಲ್ಲಿ ಇಪ್ಬಾತನಲ್ಲ ನೋಡಾ. ಓಂಕಾರವೆಂಬ ಪೀಠಿಕೆ ನಾನಾಗಿ ನಿಶ್ಶಬ್ದವೆಂಬ ಲಿಂಗವ ನೆಲೆಗೊಳಿಸಿ ಬೆರಸಿ ಬೇರಿಲ್ಲದೆ ಇಪ್ಪೆ ನೋಡಯ್ಯಾ, ಕಪಿಲಸಿದ್ಧಮಲ್ಲಿನಾಥಯ್ಯಾ, ನೀವು ಪ್ರಣವರೂಪಾಗಿ.
Transliteration Nā nim'ma rūpa vicārisuvanalla kēḷā; nam'ma dhyānadalli ippatānalla kēḷā. Atyatiṣṭhaddaśāṅguladalli nim'manilisi, nānondeḍeyalli ippātanalla nōḍā. Ōṅkāravemba pīṭhike nānāgi niśśabdavemba liṅgava nelegoḷisi berasi bērillade ippe nōḍayya, kapilasid'dhamallināthayya, nīnu praṇavarūpāgi.