ವಚನ - 1371     
 
ಅಯ್ಯಾ, ನಿಮ್ಮ ಕರಸ್ಥಲದ ಘನ ನಿಮ್ಮಲ್ಲಿರಲಿ. ಕರಸ್ಥಲವನೊಲ್ಲೆ, ಪರಸ್ಥಲವನೊಲ್ಲೆ, ಆವುದನೊಲ್ಲೆ ನೋಡಯ್ಯಾ. ಕಪಿಲಸಿದ್ಧಮಲ್ಲಿನಾಥಯ್ಯಾ, ನೀ ಒಲಿದು, ಸಂಗನ ಬಸವಣ್ಣನ ಶ್ರೀಪಾದವ ತೋರಿಹೆನೆಂಬ ಮಾತಿಂಗೆ ಮಾರುಹೋದೆನು ಇನ್ನು ತೋರಿ ಎನ್ನನುಳುಹಿಕೊಳ್ಳಾ, ಎನ್ನ ದೇವರ ದೇವಾ.