ವಚನ - 178     
 
ಕೈಯ ಸಂಕಲೆಯ ಕಳೆದೆಯಲ್ಲಾ! ಕಾಲ ಸುತ್ತಿದ ಪಾಶವ ಹರಿದೆಯಲ್ಲಾ! ಸುತ್ತಿ ಮುತ್ತಿರ್ದ ಬಲೆಯ ಕುಣಿಕೆಯಿಂದ ಹೊರವಡಿಸಿದೆಯಲ್ಲಾ! ಚೆನ್ನಮಲ್ಲಿಕಾರ್ಜುನಾ, ನೀನು ಕೊಟ್ಟವಧಿ ತುಂಬುವ ಮುನ್ನ ಮುಟ್ಟುವೆ ನಿಮ್ಮನು.