Index   ವಚನ - 1393    Search  
 
ತನು ಕೊಟ್ಟ ಬಳಿಕ ದೇಹವೆಲ್ಲಿಹದೊ? ಧನ ಕೊಟ್ಟ ಬಳಿಕ ಭೋಗಂಗಳೆಲ್ಲಿಹವೊ? ಇವೆಲ್ಲ ಬರಿಯ ಭ್ರಮೆ! ಕೊಟ್ಟೆವೆಂಬವರ ಮುಖವ ನೋಡಲಾಗದು. ಕೊಟ್ಟು ಭಕ್ತನಾದೆನೆಂಬ ನುಡಿ ಸಮನಿಸದಯ್ಯಾ ಗುರುವೆ, ನಿಮ್ಮ ಶರಣರ ಬುದ್ಧಿಗೆ ಕಪಿಲಸಿದ್ಧಮಲ್ಲಿಕಾರ್ಜುನಾ.