ವಚನ - 1415     
 
ದರ್ಪಣದಲ್ಲಿ ಮುಖವ ನೋಡುವರಲ್ಲದೆ. ದರ್ಪಹರನಲ್ಲಿ ಮುಖವ ನೋಡುವರೊಬ್ಬರೂ ಇಲ್ಲ, ನೋಡಯ್ಯಾ. ನ್ಯಾಯದಲ್ಲಿ ದ್ರವ್ಯವ ಕೊಡುವರಲ್ಲದೆ, ನ್ಯಾಯಾತೀತನ ಪೂಜೆಗೆ ಒಬ್ಬನೂ ಭಂಡಾರವೀಡಾಡಲಿಲ್ಲ; ಕಪಿಲಸಿದ್ಧಮಲ್ಲಿಕಾರ್ಜುನಗಳ್ಳರು!