Index   ವಚನ - 1416    Search  
 
ಪುಣ್ಯಪಾಪವೆಂಬುದದಾರಿಗರಿಕೆಯುಂಟಯ್ಯಾ? ಪುಣ್ಯವಂತಿರಲಿ, ಪಾಪವಂತಿರಲಿ; ಪೂಜಿಸಿ ಪಡೆವುದು ಪುಸಿಯಲ್ಲ. ಇದು ಕಾಕುಭಾಷೆ ಎಂದಲ್ಲಿ, ಪೂಜಿಸಿದವಂಗೆ ಸಂಪದಾದಿಶಕ್ತಿಮುಕ್ತಿ ಬರುವುದೇನಿಲ್ಲ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.