•  
  •  
  •  
  •  
Index   ವಚನ - 1417    Search  
 
ಆಗುವುದಾದಡೆ ನಿನ್ನಪೂಜೆ ಪೂಜೆಯದೇಕೊ, ಲಿಂಗ ಲಿಂಗಯ್ಯಾ? `ಯಥಾ ಭಾವಸ್ತಥಾ ದೇವಃ' ಎಂಬ ಭಾವವಿದ್ದೆಡೆಯಲ್ಲಿ, ಆದಂತಾಗಲಿ, ಹೋದಂತೆ ಹೋಗಲಿ, ನಿಮ್ಮ ಪೂಜಿಸಿದವರಿಗೆ ಸಂಪದಾದಿ ಮಹದೈಶ್ವರ್ಯ ತಪ್ಪದು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Āguvudādaḍe ninnapūje pūjeyadēko, liṅga liṅgayya? `Yathā bhāvastathā dēvaḥ' emba bhāvaviddeḍeyalli, ādantāgali, hōdante hōgali, nim'ma pūjisidavarige sampadādi mahadaiśvarya tappadu nōḍā, kapilasid'dhamallikārjunā.