ವಚನ - 1420     
 
ಲಿಂಗದಲ್ಲಿ ಬೆರೆದಲ್ಲಿ ಬಳಿಕ ಅಂಗದಲ್ಲಿ ಬೆರೆಯಲುಂಟೆ ದೇವಾ? ಅಲ್ಲಲ್ಲ. ಅಂಗದಲ್ಲಿ ಬೆರೆದ ಬಳಿಕ ಲಿಂಗ[ದಲ್ಲಿ] ಬೆರೆಯಲುಂಟೆ ದೇವಾ, ಕಪಿಲಸಿದ್ಧಮಲ್ಲಿಕಾರ್ಜುನಾ, ನಿಮ್ಮ ಪೂಜಿಸಿದ ಫಲ ಪಕ್ವವಾಗದನ್ನಕ್ಕ?