•  
  •  
  •  
  •  
Index   ವಚನ - 1426    Search  
 
ಮೂರಕ್ಕೆ ಮೂರಾಗಿ ಮೂರು ತನ್ನಯ ಸೀಮೆ, ಮೂರೊಂದಾದನೈ ಬಸವಣ್ಣನು. ಆರು ಮನೆಯಲ್ಲಿದ್ದು ಆರಾರರಿಂ ಮೇಲೆ ಮೀರಿಪ್ಪ ಭಕ್ತಿಯಲಿ ತೋರಿಪ್ಪುದೀಗ ತನ್ನ ರೂಪು. ರೂಪಾರೂಪು ಚೆನ್ನಬಸವಣ್ಣನಿಂದ ಆನು ನೀನಾದೆನೈ ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Mūrakke mūrāgi mūru tannaya sīme, mūrondādanai basavaṇṇanu. Āru maneyalliddu ārārariṁ mēle mīrippa bhaktiyali tōrippudīga tanna rūpu. Rūpārūpu cennabasavaṇṇaninda ānu nīnādenai kapilasid'dhamallikārjunā.