ಗುರುಲಿಂಗ ಬಸವಣ್ಣ, ಚರಲಿಂಗ ಬಸವಣ್ಣ,
ಕರುಣಾಕರನು ಚೆನ್ನಬಸವಣ್ಣನು.
ಶರಣಸ್ಥಲದ ಕಲ್ಪಸುರಭೂಜ ಫಲವಿತ್ತ
ಕರುಣಾಕರನು ಚೆನ್ನಬಸವಣ್ಣನು.
ಆ ಬಸವಣ್ಣನ ಕೃಪೆಯಿಂದ ಆದಿ ಅಕ್ಷರವರಿದು
ಸಾಧಿಸಿದೆ ನಿಮ್ಮುವನು ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.
Transliteration Guruliṅga basavaṇṇa, caraliṅga basavaṇṇa,
karuṇākaranu cennabasavaṇṇanu.
Śaraṇasthalada kalpasurabhūja phalavitta
karuṇākaranu cennabasavaṇṇanu.
Ā basavaṇṇana kr̥peyinda ādi akṣaravaridu
sādhiside nim'mavanu kapilasid'dhamallikārjunayya.