ವಚನ - 1439     
 
ಗುಣವ ನೋಡದೆ ಹೊಗಳುವ ಜಂಗಮವು ಬ್ರಹ್ಮನ ಸಂತತಿ. ಕಾಡಿ ಬೇಡುವ ಜಂಗಮವು ನಾರಾಯಣನ ಸಂತತಿ. ವ್ಯಾಪಾರಿಕ ಜಂಗಮವು ಈಶ್ವರನ ಸಂತತಿ. ಹೊಗಳದೆ, ಕಾಡದೆ, ಬೇಡದೆ, ಬಲಾತ್ಕಾರದಿಂದುಣ್ಣದೆ, ವ್ಯವಹರಿಸದೆ, ಭಿಕ್ಷಮುಖದಿಂದುಂಬ ಜಂಗಮವ ನೋಡಿ, ಎನ್ನ ಮನ ನೀವೆಂದು ನಂಬಿತ್ತಯ್ಯಾ, ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ.