ವಚನ - 1440     
 
ವೇಷಧಾರಿ ಜಂಗಮರನಂತರುಂಟು; ವೇಷವಳಿದವರನೊಬ್ಬರನು ಕಾಣೆ. ಬಿಂದುನಿಗ್ರಹದ ಜಂಗಮರನಂತರುಂಟು; ಬಿಂದುರಹಿತ ಜಂಗಮರನೊಬ್ಬರನು ಕಾಣೆ. ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ, ಜಂಗಮವೆನ್ನಬೇಕು, ಪ್ರಭುವೇ ಜಂಗಮವೆನ್ನಬೇಕು. ವೇಷಧಾರಿಯೆಂದು ಇನ್ನುಳಿದವರೊಪ್ಪಚ್ಚಿ ಅಳವಡೆಂದಡೆ, ಅಳವಡದು ನೋಡಾ ನಿನ್ನ ಮುಂದೆ.