ವಚನ - 1450     
 
ಮನದಲ್ಲಿ ಸಂಕಲ್ಪ-ವಿಕಲ್ಪಂಗಳು ನೋಡಯ್ಯಾ. ಮನಸಿನ ಕಾರ್ಯವೆ ಪುಣ್ಯ-ಪಾಪ ನೋಡಯ್ಯಾ. `ಮನಃ ಕಾರ್ಯಂ ಜಗದ್ಭೇದಂ' ಎಂಬುದು ಹುಸಿಯಲ್ಲ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.