•  
  •  
  •  
  •  
Index   ವಚನ - 1453    Search  
 
ಅಂಗವೇ ಲಿಂಗವಾಗಿಹೆನೆಂಬವನ ಭಾವ ಇದರಲ್ಲೇ ನಿಶ್ಚಯ ನೋಡಾ, ಮನವೆ ಸ್ತುತಿ ನಿಂದೆಗಳಲ್ಲಿ ಹರ್ಷರೋಷಗಳಿಲ್ಲದಿರಬೇಕು. ನೀಚಾನೀಚ ಗುಣವ ನೋಡದೆ ನ[ಮ್ರ] ಭಾಷಾವಂತನಾಗಬೇಕು. ಸರ್ವ ಜೀವಿಗಳ ತನ್ನಂತೆ ತಿಳಿದು ನೋಡಬೇಕು. ಸಂಶಯಾಸಂಶಯವಳಿದು ನಿಶ್ಚಿಂತನಾಗಬೇಕು. ಆಕಾಶದ ಬೆಳಗಿನ ಬೆಳಗ ನೋಡಿ ಬೆಳಗುಮಯನಾಗಬೇಕು ನೋಡಾ. ಎಲೆ ಮನವೆ, ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ.
Transliteration Aṅgavē liṅgavāgihenembavana bhāva idarallē niścaya nōḍā, manave stuti nindegaḷalli harṣarōṣagaḷilladirabēku. Nīcānīca guṇava nōḍade na[mra] bhāṣāvantanāgabēku. Sarva jīvigaḷu tannante tiḷidu nōḍabēku. Sanśayāsanśayavaḷidu niścintanāgabēku. Ākāśada beḷagina beḷagina nōḍi beḷagumayanāgabēku nōḍā. Ele manave, kapilasid'dhamallikārjunanalli.