ವಚನ - 1462     
 
ಸೋಹಂ ಎಂಬುದು ಅಂತರಂಗದ ಮದ ನೋಡಯ್ಯಾ. `ಶಿವೋಹಂ' ಎಂಬುದು ಬಹಿರಂಗದ ಮದ ನೋಡಯ್ಯಾ. ಈ ದ್ವಂದ್ವವನಳಿದು `ದಾಸೋಹಂ' ಎಂದೆನಿಸಯ್ಯಾ ಕಪಿಲಸಿದ್ಧಮಲ್ಲಿಕಾರ್ಜುನಾ.