•  
  •  
  •  
  •  
Index   ವಚನ - 1464    Search  
 
ಪತ್ರೆಯ ನೇಮದವರು ನೋಡಯ್ಯಾ ಪಶು ಆಡುಗಳು. ಲಿಂಗಾರ್ಚನೆಯ ನೇಮದವರು ನೋಡಯ್ಯಾ ಚತುರ್ವರ್ಣದವರು. ಜಂಗಮ ಸಂತೃಪ್ತಿಯ ನೇಮದವರು ನೋಡಯ್ಯಾ ಭಕ್ತರು. ತನ್ನ ತಾ ತಿಳಿದ ನೇಮದವರು ನೋಡಯ್ಯಾ ವೀರಶೈವಾಗ್ರಗಣ್ಯರು, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Patreya nēmadavaru nōḍayya paśu āḍugaḷu. Liṅgārcaneya nēmadavaru nōḍayya caturvarṇadavaru. Jaṅgama santr̥ptiya nēmadavaru nōḍayya bhaktaru. Tanna tā tiḷida nēmadavaru nōḍayya vīraśaivāgragaṇyaru, kapilasid'dhamallikārjunā.