ಅಯ್ಯಗಳು ಬಂದಿಹರೆಂದು `ಅಯ್ಯಾ ಅಯ್ಯಾ' ಎಂದು
ಬೆಂಬತ್ತುವನಲ್ಲ ನಾನು.
ಅಯ್ಯಗಳೆಂದಡೆ ಅಯ್ಯತನವೇರಿತ್ತೆ ದೇವಾ?
ಗೋವಿನ ಹಾಲು ಎಂದಡೆ, ಹಿಂಡಲಿಲ್ಲ, ರುಚಿಸಲಿಲ್ಲ.
ತನ್ನ ಹಸ್ತ ಮುಟ್ಟಿದಲ್ಲಿ ರುಚಿಸಿತ್ತಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Ayyagaḷu bandiharendu `ayya ayya' enda
bembattuvanalla nānu.
Ayyagaḷendaḍe ayyatanavēritte dēvā?
Gōvina hālu endaḍe, hiṇḍalilla, rucisalilla.
Tanna hasta muṭṭidalli rucisittayyā,
kapilasid'dhamallikārjunā.