ವಚನ - 1485     
 
ಕಾಯ ಮುನ್ನವೊ, ಕಾಯದಲ್ಲಿಪ್ಪ ಮನ ಮುನ್ನವೊ? ಮನ ಮುನ್ನವೊ, ಮನದಲ್ಲಿದ್ದ ಚೈತನ್ಯ ಮುನ್ನವೊ? ಚೈತನ್ಯ ಮುನ್ನವೊ, ಚೈತನ್ಯಾತ್ಮಕ ಮಾಯೆ ಮುನ್ನವೊ? ಅವು ಮುನ್ನವಲ್ಲ, ಮುನ್ನವಲ್ಲ ; ನಿನ್ನ ನಿರಾಳ ನಿಜದ ನಿರ್ವಯಲಿನ ಶೂನ್ಯಾಶೂನ್ಯವೆ ಮುನ್ನ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.