ವಚನ - 1486     
 
ತಾ ಮುನ್ನವೊ, ತನ್ನ ಮನ ಮುನ್ನವೊ? ತನ್ನ ಕಾಯ ಮುನ್ನವೊ, ತಾ ಮುನ್ನವೊ, ಅಯ್ಯಾ? ತನ್ನ ಮುನ್ನೆಂಬಲ್ಲಿ ತಿಳಿಯದೆ ಹೋಯಿತ್ತು. ಮನ ಮುನ್ನೆಂಬಲ್ಲಿ ಕಾಯಕ್ಕೊಳಗಾಯಿತ್ತು. ಕಾಯ ಮುನ್ನೆಂಬಲ್ಲಿ ಜಡಮಯ ಪ್ರಳಯಕ್ಕೊಳಗಾಯಿತ್ತು. ತಾ ಮುನ್ನಲ್ಲ, ತನ್ನ ಮನ ಮುನ್ನಲ್ಲ, [ತನ್ನ ಕಾಯ ಮುನ್ನಲ್ಲ]; ತಿಳಿದಾಗಲೆ ಮುನ್ನ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.