•  
  •  
  •  
  •  
Index   ವಚನ - 1488    Search  
 
ಜಲದಲ್ಲಿಯ ಚಂದ್ರನ ಚಲನೆ ಜಲದಲ್ಲಲ್ಲದೆ, ನಿಜಚಂದ್ರನಲ್ಲಿಲ್ಲವಯ್ಯಾ. ಘಟದಲ್ಲಿಯ ಪ್ರತಿಬಿಂಬಗಳು ಘಟದಲ್ಲಲ್ಲದೆ ಬಿಂಬದಲ್ಲಿಲ್ಲ ನೋಡಯ್ಯಾ. ಜಲದಲ್ಲಿಯ ಚಂದ್ರನ ಚಲನೆ ಘಟದಲ್ಲಿಯ ಪ್ರತಿಬಿಂಬ ನಿಜವಲ್ಲ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Jaladalliya candrana calane jaladallallade, nijacandranallavayya. Ghaṭadalliya pratibimbagaḷu ghaṭadallallade bimbadallilla nōḍayya. Jaladalliya candrana calane ghaṭadalliya pratibimba nijavalla nōḍā, kapilasid'dhamallikārjunā.