•  
  •  
  •  
  •  
Index   ವಚನ - 1487    Search  
 
ಕಾಯ ಧರಿಸಿದವ ನವನೀತ ರೋಮದಂತಿರಬೇಕು, ಮುಕುರದ ಪ್ರತಿಬಿಂಬದಂತಿರಬೇಕು, ಬೆಟ್ಟದಲ್ಲಿಯ ಕಾಡಕಿಚ್ಚಿನಂತಿರಬೇಕು, ಆಷಾಢದಲ್ಲಿಯ ಚಂಡಮಾರುತನಂತಿರಬೇಕು, ಸರ್ವರಲ್ಲಿ ಸರ್ವರಂತಾಗಿರಬೇಕು, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Kāya dharisidava navanīta rōmadantirabēku, mukurada pratibimbadantirabēku, beṭṭadalliya kāḍakiccinantirabēku, āṣāḍhadalliya caṇḍamārutanantirabēku, sarvaralli sarvarantavāgi, kapilasid'dhamallikārjunā.