•  
  •  
  •  
  •  
Index   ವಚನ - 1490    Search  
 
ವಸ್ತು ಒಂದರಲ್ಲಿ ಕಲ್ಪಿತದ್ವಯವಾದುವು ನೋಡಾ. ಹಗ್ಗವಲ್ಲ ಸರ್ಪವೆಂಬುದೆ ಅಧ್ಯಾರೋಪ; ಸರ್ಪವಲ್ಲ ಹಗ್ಗವೆಂಬುದೆ ಅಪವಾದ. ವಸ್ತುವಲ್ಲ ಮಾಯೆಯೆಂಬುದೆ ಅವಿದ್ಯೆ; ಮಾಯೆಯಲ್ಲ ವಸ್ತುವೆಂಬುದೆ ವಿದ್ಯೆಯಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Vastu ondaralli kalpitadvayavādavu nōḍā. Haggavalla sarpavembude adhyārōpa; sarpavalla haggavembude apavāda. Vastuvalla māyembude avidye; māyeyalla vastuvembude vidyeyayya, kapilasid'dhamallikārjunā.