ಸೂತ್ರವ ಬಿಟ್ಟಿತೆಂದು ಸಂದೇಹಗೊಳ್ಳದಿರಾ, ಮನುಜರಿರಾ.
ಸೂತ್ರವಿದ್ದಲ್ಲಿ ನಿಮ್ಮಂಗಕ್ಕೆ ಸೂತ್ರವಾದನಯ್ಯಾ ಲಿಂಗಮೂರ್ತಿ.
ಸೂತ್ರ ತಪ್ಪಿತ್ತೆಂಬಲ್ಲಿ ಸೂತ್ರ ತಪ್ಪಿಲ್ಲ,
ನಿಮ್ಮ ಮನಸ್ಸೂತ್ರವೆ ಭಿನ್ನವಾಯಿತ್ತಯ್ಯಾ,
ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Sūtrava biṭṭitendu sandēhagoḷḷadirā, manujarirā.
Sūtraviddalli nim'maṅgakke sūtravādanayyā liṅgamūrti.
Sūtra tappitemballi sūtra tappilla,
nim'ma manas'sūtrave bhinnavāyittayyā,
ele kapilasid'dhamallikārjunā.