ಜ್ಯೋತಿಷ್ಯವದು ಜ್ಯೋತಿಯಂತಯ್ಯಾ:
ಕೂಡುವ ಕಾಲಕ್ಕೆ ಪ್ರಕಾಶಮಯವು:
ಕೂಡದ ಕಾಲಕ್ಕೆ ದಗ್ಧಮಯವು.
ಇದರಂತುವನರಿದವ ವರರುಚಿಯಲ್ಲದೆ,
ಮತ್ತೊರ್ವನ ಕಾಣೆ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Jyōtiṣyavadu jyōtiyantayya:
Kūḍuva kālakke prakāśamayavu:
Kūḍada kālakke dagdhamayavu.
Idarantuvanaridava vararuciyallade,
mattōrvana kāṇe, kapilasid'dhamallikārjunā.