ವಚನ - 1534     
 
ಕೀಳಾಗಿ ಹೋದಂತೆ ಆಳ್ದಂಗೆ ಅಮೃತ ಕೊಟ್ಟಿತ್ತಯ್ಯಾ [ಆವು]. ಆಳಾಗಿ ನಡೆದಂತೆ ಮೋಕ್ಷವ ಕೊಟ್ಟನಯ್ಯಾ, ಮಹೇಶನು. ಕೀಳಾಳು ಬಹು ಲೇಸು ಕಂಡಯ್ಯಾ, ಲೋಕದ ಪ್ರಾಣಿಗಳಿಗೆ, ಕಪಿಲಸಿದ್ಧಮಲ್ಲಿಕಾರ್ಜುನಾ.